Monday, April 25, 2011

SAMUDAYIKA SABHE KAPU

SAMUDAYIKA SABHE KAPU


ಸ್ವಾರ್ಥಕ್ಕಾಗಿ ಧಮರ್ೋಪಯೋಗ ಕ್ಷೊಭೆಯಾಗಿದೆ 


"ಜೀವನದ ಎಲ್ಲಾ ರಂಗಗಳಲ್ಲಿ ನಾವು ನಮ್ಮ ಬುದ್ಧಿಶಕ್ತಿಯನ್ನು ಧಾರಾಳ ಉಪಯೋಗಿಸುತ್ತೇವೆ. ಆದರೆ ಧರ್ಮ ಮತ್ತು ದೇವರ ವಿಚಾರ ಬಂದಾಗ ನಾವು ಯಾರ್ಯಾರದೋ ಹಿಂಬಾಲಕರಾಗಿ ಬಿಡುತ್ತೇವೆ ಮತ್ತು ಅವರು ನಮ್ಮನ್ನು ಎಲ್ಲಿಂದೆಲ್ಲಿಗೋ ಕೊಂಡೊಯ್ಯುತ್ತಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಿಭಾಗದ ಉಪಸಂಚಾಲಕ ಅಮೀನ್ ಅಹ್ಸನ್ ಅವರು ಅಭಿಪ್ರಾಯಪಟ್ಟರು.  ಅವರು ಇತ್ತೀಚೆಗೆ ಕಾಪುವಿನ ಜಾಫರ್ ಟವರ್ನಲ್ಲಿ ಜರುಗಿದ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.  ತನ್ನ ಸ್ವಾರ್ಥಕ್ಕಾಗಿ ಧರ್ಮವನ್ನು ಉಪಯೋಗಿಸುವುದು, ತನ್ನ ಪಾಂಡಿತ್ಯದಂತೆ ಧರ್ಮವನ್ನು ನಿರೂಪಿಸುವುದು ಕ್ಷೊಭೆಯಾಗಿದೆ. ಧರ್ಮವನ್ನು ವ್ಯಾಪಕವಾಗಿ ದುರುಯೋಗಿಸುತ್ತಿರುವುದನ್ನು ನಾವು ನಮ್ಮ ಸುತ್ತಲೂ ನೋಡಬಹುದಾಗಿದೆ. ಸಂಪ್ರದಾಯ ಮತ್ತು ಪರಂಪರಾಗತ ತತ್ವಾದರ್ಶವೇ ಧರ್ಮವೆಂದು ಬಗೆದ ಸಮಾಜದಲ್ಲಿ ಧರ್ಮದ ನೈಜ ಕಲ್ಪನೆಯನ್ನು ಜಾಗೃತಗೊಳಿಸಲು ಶ್ರಮವಹಿಸಬೇಕಾದ ಅಗತ್ಯವಿದೆ ಎಂದರು.  







ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್, ಸಾಗರದ ಅಧ್ಯಕ್ಷರಾದ 
ಜ| ರಿಯಾಝುದ್ದೀನ್ರವರು "ಈ ಲೋಕದ ಜೀವನ ಅತ್ಯಂತ ಕ್ಷಣಿಕ. ಆದರೂ ಮಾನವ ನಿರಂತರವಾಗಿ  ಬದುಕಿರುತ್ತಾನೋ ಎಂಬಂತೆ ಜೀವಿಸುತ್ತಾನೆ. ಅವನು ಶೇಖರಿಸುವ ಸಂಪತ್ತಿಗೆ, ಅವನ ದುರಾಸೆಗಳಿಗೆ ಮಿತಿಯೇ ಇಲ್ಲವಾಗಿದೆ." ಮರಣಾಸನ್ನನಾಗಿರುವಾಗಲೂ ಅವನಿಗೆ ವ್ಯಾಪಾರ ವಹಿವಾಟಿನದೇ ಚಿಂತೆ. ಇದು ಮಾನವ ತನ್ನ ಜೀವನದ ವಾಸ್ತವಿಕತೆಯನ್ನು ಅರಿಯದ ಪರಿಣಾಮ ಎಂದರು.

ಆರಂಭದಲ್ಲಿ ಹೂಡೆ ಸ್ವಾಲಿಹಾತ್ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರಾದ ಮೌ| ಆದಂ ಅವರು ಉದ್ಭೋದನೆಗೈದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ವಲಯದ ಅಧ್ಯಕ್ಷರಾದ ಶಫಿ ಮಾಸ್ತರ್ರವರು ಸ್ವಾಗತಿಸಿ ಪ್ರಸ್ತಾವನೆಗೈದರು. ವೈ.ಸಿ ಅಬ್ದುಲ್ಲಾರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಕಾರ್ಯದಶರ್ಿ ಯು. ಅನ್ವರ್ ಅಲಿಯವರು ಧನ್ಯವಾದವಿತ್ತರು. 
NEWS




No comments:

Post a Comment