ಉಡುಪಿ: ಜಮಾಅತೆ ಇಸ್ಲಾಮೀ ಹಿಂದ್, ಉಡುಪಿ ಜಿಲ್ಲಾ ಮಟ್ಟದಲ್ಲಿ ಪದವಿ ಪೂರ್ವ ತರಗತಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಮಂಗಳೂರು ಯೂತ್ವಿಂಗ್ನ ಜ| ಅಬ್ದುಲ್ ಗಫೂರ್ರವರು, ಭಾರತದ ನೆಲ, ಜಲ ಮತ್ತು ಇತರ ನೈಸಗರ್ಿಕ ಸಂಪತ್ತುಗಳ ಮೇಲೆ ವಿದೇಶೀ ಪ್ರಭುತ್ವ, ಮತ್ತು ವಿದೇಶೀ ಸಂಸ್ಕೃತಿಯ ಪ್ರಭಾವದಿಂದ ಭಾರತವು ತನ್ನ ಸ್ವಂತಿಕೆಯನ್ನು ಕಳೆದುಕೊಂಡು, ಪರೋಕ್ಷವಾಗಿ ವಿದೇಶೀ ದಾಸ್ಯದತ್ತ ಸರಿಯುತ್ತಿದೆಯೆಂದೂ, ಹೆಣ್ಣಿನ ಶೋಷಣೆ ಮತ್ತು ಮಾದ್ಯಮಗಳ ಕಾಳಭಿರುಚಿಯ ಪ್ರಸಾರಗಳಿಂದ ನೈತಿಕ ಅದಃಪತನದತ್ತ ದೇಶವು ಸಾಗುತ್ತಿದೆ ಎಂದೂ, ಈ ಬಗ್ಗೆ ಭಾರತೀಯರು ಈಗಿನಿಂದಲೇ ಜಾಗೃತರಾಗಬೇಕೆಂದು ಹೇಳಿದರು.
ಪ್ರಬಂಧ ಸ್ಪಧರ್ೆಯಲ್ಲಿ ಕು| ಜಯಲಕ್ಷ್ಮೀ, ಕೋಡಿಕನ್ಯಾನ ಸರಕಾರಿ ಜೂನಿಯರ್ ಕಾಲೇಜು(ಪ್ರಥಮ), ಕು| ಸಂತಸ, ಪಿ.ಪಿ.ಸಿ ಉಡುಪಿ(ದ್ವಿತೀಯ) ಮತ್ತು ಕು| ವಿನಯಾ ಶೆಟ್ಟಿ( ಹಿಂದೂ ಜೂನಿಯರ್ ಕಾಲೇಜು ಶಿರ್ವ(ತೃತೀಯ) ಬಹುಮಾನ ಗಳಿಸಿದರು
ಮೌಲಾನ ಮುಹಮ್ಮದ್ ಆದಂ ಹೂಡೆಯವರು ಕುರ್ಆನ್ ಪಠಿಸಿದರು. ಯು.ಅನ್ವರ್ ಅಲಿ ಕಾಪು (ಜಿಲ್ಲಾ ಕಾರ್ಯದಶರ್ಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ) ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಫೀ ಅಹ್ಮದ್ ಕಾಪು ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ರಹಿಮಾನ್ ರಫೀಕ್ ಮಲ್ಪೆ (ಅಭಿಯಾನ ಸಂಚಾಲಕರು) ವಂದಿಸಿದರು.
http://www.kemmannu.com/news/
http://mangalorean.com/news.
http://www.sahilnews.org/
http://www.megamedianews.in/13.01.10youthWing.htm