RAHMATH HOUSE OPENING CEREMONY
ಜಮಾಅತ್ ನ ಚಟುವಟಿಕೆ ಇತರರಿಗೆ ಮಾದರಿ - ಡಾ | ದೇವಿಪ್ರಸಾದ್.
ಕಾಪು : ತೀರಾ ಆರ್ಥಿಕ ದುರ್ಬಲ ಜನರ ಸೇವೆಗೈದು ಅವರ ಅಗತ್ಯದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಬೆಳಪು ಗ್ರಾಮದಲ್ಲಿ ಸುಮಾರು ಆರು ಲಕ್ಷ ರೂಪಾಯಿ ವ್ಯಯಯಿಸಿ ಕಾಂಕ್ರೇಟ್ ನ ಮನೆ ನಿರ್ಮಿಸಿಕೊಟ್ಟ ಜಮಾಅತೆ ಇಸ್ಲಾಮೀ ಹಿಂದ್ ನ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಡಾ | ದೇವಿಪ್ರಸಾದ್ ಶೆಟ್ಟಿಯವರು ಹೇಳಿದರು.
ಅವರು, ಬೆಳಪು ಗ್ರಾಮದ ದೇವೇಗೌಡ ಬಡಾವಣೆ ಯಲ್ಲಿ ರಹಮತ್ ಎಂಬವರಿಗೆ ಜಮಾಅತೆ ಇಸ್ಲಾಮೀ ಹಿಂದ್ ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಯಾಗಿ ಭಾಗವಹಿಸಿ ಮಾತಾಡಿದರು.
ಇನ್ನೋರ್ವ ಅಥಿತಿಯಾಗಿರುವ ಲೀಲಾಧರ ಶೆಟ್ಟಿಯವರು , ಯಾವುದೇ ತಾರತಮ್ಯ ಇಟ್ಟುಕೊಳ್ಳದೆ ಸಮಾಜದಲ್ಲಿ ಇರುವ ಎಲ್ಲಾ ವರ್ಗದವರಿಗೆ ಸಹಾಯಹಸ್ತ ಜಮಾಅತೆ ಇಸ್ಲಾಮೀ ಹಿಂದ್ ನೀಡುತ್ತಿದ್ದು ಅವರಿಗೆ ನಮ್ಮ ಬೆಂಬಲ ಸದಾ ಇದೆ ಎಂದು ತಿಳಿಸಿದರು.
ಉದ್ಯಮಿ ಎಸ್. ಕೆ. ಇಕ್ಬಾಲ್ ರವರು, ಇಹಲೋಕದಲ್ಲಿ ಮಾಡಿದ ಕೆಲಸಕ್ಕೆ ಪ್ರತಿಫಲ ಪರಲೋಕದಲ್ಲಿ ಸಿಗುತ್ತದೆ. ಅದಕ್ಕಾಗಿ ಉತ್ತಮ ಉತ್ತಮ ಕೆಲಸ ಮಾಡುತ್ತಿರಬೇಕು ಎಂದರು.
ಇನ್ನೋರ್ವ ಮುಖ್ಯ ಅಥಿತಿ ಜನಾಬ್ ಶಭೀ ಅಹಮದ್ ಕಾಝಿ ಯವರು, ಜಮಾಅತೆ ಇಸ್ಲಾಮೀ ಹಿಂದ್, ಸಮಾಜದಲ್ಲಿ ಅಗತ್ಯವಿರುವವರ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿ ಅದನ್ನು ಪೂರೈಸುದರಿಂದ ಸಮಾಜದಲ್ಲಿರುವ ಸಮಸ್ಯೆಗಳನ್ನು ದೂರೀಕರಿಸಿದಂತೆ ಆಗುತ್ತದೆ ಎಂದರು.
ಮನೆಯನ್ನು ಉದ್ಘಾಟಿಸಿ ಕೀಲಿ ಕೈಯನ್ನು ಹಸ್ತಾಂತರಿಸಿದ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ಅಧ್ಯಕ್ಷರಾದ ಡಾ| ಅಬ್ದುಲ್ ಅಜೀಜ್ ರವರು, ಕುರ್ ಆನ್ ನಂತೆ ಮನುಷ್ಯ ಜೀವಿಸಿದರೆ ಅದು ಆತನ ಇಹ ಮತ್ತು ಪರಲೋಕಕ್ಕೆ ಪ್ರಯೋಜನ ಆಗುತ್ತದೆ ಎಂದರು.
ಸಭಾ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಚಾಲಕರಾದ ಜನಾಬ್ ಶಬ್ಬೀರ್ ಮಲ್ಪೆ ಯವರು , ಮನುಷ್ಯನಿಗೆ ರೋಟಿ , ಕಪಡಾ ಔರ್ ಮಕಾನ್ ಮೂಲಭೂತ ಅಗತ್ಯದ ವಸ್ತು ಆಗಿದ್ದು , ಇದರ ವ್ಯವಸ್ಥೆಗಾಗಿ ಸಮಾಜದಲ್ಲಿ ಇರುವ ದೊಡ್ಡ ಶ್ರೀಮಂತರು ತಮಗಾಗಿ ಅರಮನೆಯನ್ನು ಕಟ್ಟಿ ಅಂದ ನೋಡಿದರೆ ಸಾಲದು. ಬದಲಾಗಿ ಅವರ ಸಮಾಜದಲ್ಲಿ ಇರುವ ಅಸಹಾಯಕ, ಬಡ, ನಿರ್ಗತಿಕ ಜನರ ಬಗ್ಗೆಯೂ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಯವರು ಪ್ರಾಸ್ತಾವಿಕವಾಗಿ, ಜಮಾಅತೆ ಇಸ್ಲಾಮೀ ಹಿಂದ್ ನ ದ್ಯೇಯ ಮತ್ತು ದೋರಣೆ ಹಾಗೂ ಅದರ ಚಟುವಟಿಕೆ ಗಳ ಪರಿಚಯ ಮಾಡಿ, ಬಂದ ಅಥಿತಿಗಳನ್ನು ಸ್ವಾಗತಿಸಿದರು.
ಪ್ರಾಂಭದಲ್ಲಿ ಮೌಲಾನಾ ಮುಹಮ್ಮದ್ ಪರ್ವೇಜ್ ಆಲಂ ನದ್ವಿ ಯವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೊನೆಯಲ್ಲಿ ಮುಹಮ್ಮದ್ ಇಕ್ಬಾಲ್ ಆದಂ ರವರು ಧನ್ಯವಾದ ನೀಡಿದರು.
ನಿಸಾರ್ ಅಹಮದ್ ರವರು ಕಾರ್ಯಕ್ರಮ ನಿರೂಪಿಸಿದರು.
https://coastal-mirror.com/archives/67851