Sunday, March 21, 2010

Womens Day

ಸೇವೆಗೆ ಜಾತಿ ಧರ್ಮ ಅಡ್ಡಿ ಬರದು
       ಉಡುಪಿ. March- 11. "ಸೇವೆ ಮಾಡುವ ಮನಸಸ್ಸಿದ್ದರೆ ಜಾತಿ ಧರ್ಮ ಅಡ್ಡಿ ಬರದು. ನಾವೆಲ್ಲರೂ ಮನುಷ್ಯಜಾತಿ ಎಂಬ ನೆಲೆಯಲ್ಲಿ ಒಂದಾಗಿ ಬಾಳಬೇಕು".ಎಂದು ರಾಜ್ಯು ಮಹಿಳಾ ಉಪ ನಿದರ್ೇಶಕಿ ಮಾನ್ಯ ಸುಮನಾರವರು ರಾಜ್ಯ ಮಹಿಳಾ ಸ್ತ್ರೀ ಸೇವಾ ನಿಕೇತನ ಉಡುಪಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಮಹಿಳಾ ವಿಭಾಗ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೇಳಿದರು.  
      ನಾವೆಲ್ಲರೂ ಒಂದೇ ದೇವನ ಸೃಷ್ಟಿಗಳು. ಒಂದೇ ತಂದೆ ತಾಯಿಯ ಮಕ್ಕಳು. "ಈ ಲೋಕದಲ್ಲಿ ಸೃಷ್ಟಿಕರ್ತನು ಸಕಲ ಮಾನವರಿಗೆ ಒದಗಿಸಿರುವ ಎಲ್ಲಾ ಸವಲತ್ತುಗಳನ್ನು ಮಾನವನು ಅನುಭವಿಸಿ ಜೀವಿಸುತ್ತಿರುವಾಗ ತನ್ನ ಪರಿಸರದಲ್ಲಿ ಸಂಕಷ್ಟದಲ್ಲಿ ಇರುವವರಿಗೂ ನೆರವಾಗ ಬೆಕಾದುದು ಅವನ ಕರ್ತವ್ಯವಾಗಿರುತ್ತದೆ" ಎಂದು ಕುಲ್ಸೂಮ್ ಅಬೂಬಕ್ಕರ್ ಹೇಳಿದರು.

ಅಲ್ಲಿಯ ಹೆಣ್ಣು ಮಕ್ಕಳು ಸಾಂಸೃತಿಕ ಕಾರ್ಯಕ್ರಮವನ್ನು ಪ್ರದಶರ್ಿಸಿದರು. 

    ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ವತಿಯಿಂದ ವಿವಿಧ ಸ್ಪಧರ್ೆಗಳನ್ನು ಆಯೋಚಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಟ್ಟೆ ಬರೆಗಳನ್ನು ಕೂಡ ವಿತರಿಸಲಾಯಿತು 

    ಸಮೀನಾ ಶುಕೂರ್ ರವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಶಹನಾಝ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಆಸಿಯಾ ಶರೀಫ್ ಮಲ್ಪೆ ಉಪಸ್ಥಿತರಿದ್ದರು.










http://www.gulfkannadiga.com/news-22044.html