Wednesday, January 13, 2010

Womens Conference- Anti Capitalist Imperialism Campaign“save the country from slavery and poverty”


ದೇವಾಜ್ಞೆ ಯ ಅನುಸರಣೆ ಬಡವರ ಶೋಳಣೆಗೆ ಮುಕ್ತಿ - ಶಮೀರ ಜಹಾನ್
ಉಡುಪಿ : ಡಿ.20 ಫರೋವ ಚಕ್ರವತರ್ಿ ತನ್ನ ಅಧಿಕಾರ ಬಲದಿಂದ ದೇಶವನ್ನು ಬಡ-ಶ್ರೀಮಂತರೆಂಬುದಾಗಿ
ಇಬ್ಭಾಗ ಮಾಡಿ, ಬಡವರನ್ನು ಗುಲಾಮರನ್ನಾಗಿ ಮಾಡಿದಾಗ ಸೃಷ್ಟಿಕರ್ತನು ಆತನನ್ನು ಶಿಕ್ಷಿಸಿ ಆತನ ಶವವನ್ನು
ಮುಂದಿನ ಜನಾಂಗಕ್ಕೆ ನದರ್ಶನವನ್ನಾಗಿ ಮಾಡಿದ್ದನ್ನು ಕಾಣಬಹುದು. ಕೇವಲ ದೇವ ಭಯ, ದೇವಾಜ್ಷೆಯ
ಅನುಸರಣೆ ಮಾತ್ರ ನಮ್ಮನ್ನು ಈ ಗುಲಾಮಗಿರಿಯಿಂದ ಮುಕ್ತಿಗೊಳಿಸಬಹುದು ಎಂದು ಬಂಡವಾಳಶಾಹಿ ಸಾಮ್ರಾಜ್ಯತ್ವ
ವಿರೋಧಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಜಾಮಿಯಾ ಮಸೀದಿ ಉಡುಪಿಯಲ್ಲಿ ಆಯೋಜಿಸಿದ ಮಹಿಳೆಯರ
ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕಿ ಶಮೀರ ಜಹಾನ್ ಮಾತನಾಡಿದರು.
ಇನ್ನೋರ್ವ ಅತಿಥಿ ರಕ್ಷಿಂದಾ ಬಟ್ಕಳ್ರವರು ಮಾತನಾಡುತ್ತಾ ಇಂದು ಸಮಾಜದಲ್ಲಿ ಶೈತಾನನ ಅನುಸರಣೆ
ಮಾಡುವವರು ಮಾತ್ರ ಗೌರವಾನ್ವತರಾಗುತ್ತಿದ್ದಾರೆ. ಇಸ್ಲಾಮ್ ಶಾಂತಿಯ ಧರ್ಮ, ಪ್ರವಾದಿಯವರು ಇಸ್ಲಾಮನ್ನು
ಜಗತ್ತಿನ ಮೂಲೆ ಮೂಲೆಗೆ ಶಾಂತಿಯ ಮಾರ್ಗವಾಗಿ ಪಸರಿಸಿದರು. ಈ ನಟ್ಟಿನಲ್ಲಿ ನಮ್ಮ ಕಾರ್ಯ ಜನರನ್ನು
ಶಾಂತಿಯೆಡೆಗೆ ದೇವಭಯದೊಂದಿಗೆ ಜೋಡಿಸುವುದಾಗಿದೆ. ಅಂತಹ ಕಾರ್ಯ ನಮ್ಮಿಂದ ಸಾಧ್ಯವಾಗಲಿ ಎಂದು
ಹಾರೈಸಿದರು

   .
    ವಾಜಿದಾ ತಬಸ್ಸುಮ್ ರ ಕುರ್ಆನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಲ್ಸೂಮ್ ಅಬೂಬಕ್ಕರ್
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಮಾಡಿದರು. ಸಾಬಿರಾ ಸಿರಾಜ್ ಧನ್ಯವಾದವನ್ನತ್ತರು.

No comments:

Post a Comment