Eid Milan Program (Girls Islamic Organization Udupi)
At “Hotel Mourya” 3.00pm to 4.30 pmBehalf of the udupi section Girls Islamic Organizaton (GIO ) have conducted A Get together EId-Milan party on 18th sept at Hotel Mourya at 3.00pm.
ಉಡುಪಿ: Girls ಇಸ್ಲಾಮಿಕ್ ಆರ್ಗನೈಝೇಶನ್ ಉಡುಪಿ ಇದರ ವತಿಯಿಂದ ಸೆಪ್ಟೆಂಬರ್ 18 ಶನಿವಾರದಂದು ನಗರದ ಮೌರ್ಯ ಹೊಟೇಲಿನಲ್ಲಿ ಈದ್ ಮಿಲನ್ ಸೌಹಾರ್ಧ ಕೂಟವನ್ನು ಹಮ್ಮಿಕೊಳ್ಳಲಾಯಿತು.
http://www.gulfkannadiga.com
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಸರಕಾರಿ ಪ್ರಥಮ ದಜರ್ೆ ಕಾಲೇಜು ತೆಂಕನಿಡಿಯೂರು ಇದರ Co-ordination ಆಗಿರುವ ಶ್ರೀಮತಿ ನಿಕೇತನರವರು ಮಾತನಾಡಿ, "ಗತಕಾಲದ ಉತ್ತಮ ಮನುಷ್ಯರ ಚರಿತ್ರೆಗಳನ್ನು ಮಕ್ಕಳ ಮುಂದೆ ಪುನರಾವತರ್ಿಸಿದರೆ ಅದರ ಪ್ರಭಾವವು ಮಕ್ಕಳ ಮೇಲೆ ಬೀಳುವುದು ಹಾಗೂ ಶ್ಲೋಕ ಅಥವಾ ಕುರ್ಆನಿನ ಸೂಕ್ತಗಳಾಗಲಿ ಮೊದಲು ಮಾನವನನ್ನಾಗಿಸುವ ಶಿಕ್ಷಣ ನಿಡುತ್ತದೆ" ಎಂದರು.
ಇನ್ನೋರ್ವ ಅತಿಥಿಯಾದ ಮಾಧವಿ ಭಂಡಾರಿ ಹೆಚ್.ಓ.ಡಿ. ಹಿಂದಿ ವಿಭಾಗ ಪಿ.ಪಿ.ಸಿ ಕಾಲೇಜ್ ಇವರು ಕೆಲವು ಕಥೆಗಳನ್ನು ವಿಶ್ಲೇಶಿಸುತ್ತಾ "ಇತರರ ಸೇವೆಯನ್ನು ಮಾಡಿದರೆ ನಮ್ಮ ಮನಸ್ಸು ಸಮಾಧಾನ ಪಡುತ್ತದೆ ಅಲ್ಲದೆ ಸಂತೃಪ್ತವೂ ಗೊಳ್ಳುತ್ತದೆ" ಎಂದರು. ಇವರು ಕೂಡಾ ಸೌಹಾರ್ಧಕ್ಕೆ ಒತ್ತುಕೊಟ್ಟು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಹುಮೈರಾ, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಕಾರ್ಕಳ ಇವರು ಮಾತನಾಡಿ "ಮೊದಲಿನ ಭಾವೈಕ್ಯತೆಯು ಇಂದು ಜನರಲ್ಲಿ ಕಾಣುತ್ತಿಲ್ಲವಾದುದರಿಂದ ಇಂತಹ ಕೂಟಗಳು ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ" ಎಂದರು. ಅಲ್ಲದೆ ಈದುಲ್ ಫಿತರ್ನ ಮಹತ್ವವನ್ನು ವಿವರಿಸುತ್ತಾ "ಇದು ಬಡವರ ಪಾಳಿಗೆ ದೇವರ ವತಿಯಿಂದ ವರದಾನವಾಗಿದೆ" ಎಂದರು.
ಸಹೋದರಿ ಅಫ್ರೀನ್ರವರ ಕುರ್ಆನ್ ಪಠಣ ಹಾಗೂ ಸಹೋದರಿ ಸುಹಾನರವರ ಅನುವಾದದಿಂದ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಹೋದರಿ ಫರಹತ್ ದಾವೂದ್ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಹೋದರಿ ಹಪ್ಸಾ ಕುಕ್ಕಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಹೊದರಿ ಸಬಿಹಾ ಅಸಾದಿಯವರ ದನ್ಯವಾದ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
http://www.gulfkannadiga.com
No comments:
Post a Comment