ಹಸಿವು ಮುಕ್ತ ಸಮಾಜಕ್ಕಾಗಿ servy
ಉಡುಪಿ-March 14 ನಮ್ಮ ಜಿಲ್ಲೆಯ ಜನತೆ ಹಸಿವಿನಿಂದ ಬಳಲಬಾರದು, ಎಲ್ಲರಿಗೂ ಊಟ ಸಿಗಬೇಕು, "ನೆರೆಕರೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ". ಹಾಗೆಯೇ "ಧರ್ಮ ವಿರೋಧಿಗಳು ಯಾರು ಎಂದರೆ ಹಸಿದವನಿಗೆ ಉಣಬಡಿಸದವನು" ಎಂಬ ಇಸ್ಲಾಮ್ ಧರ್ಮದ ಮಾನವ ಸೇವೆಯ ಆದರ್ಶಗಳ ಬೆಳಕಿನಲ್ಲಿ ಯೂತ್ವಿಂಗ್ (YOUTH WING) ಜಮಾಅತೆ ಇಸ್ಲಾಮೀ ಹಿಂದ್ ಉಡುಪಿಯ ಕಾರ್ಯಕರ್ತರು ಜಿಲ್ಲಾದ್ಯಂತ ಮನೆ ಮನೆಗೆ ಭೇಟಿ ನೀಡಿ ಬಡವರನ್ನು, ನಿರ್ಗತಿಕರನ್ನು, ಹಸಿದವರನ್ನು ಸಂದಶರ್ಿಸಿದರು. ಮುಂದಿನ ಕಾರ್ಯಯೋಜನೆಯ ಪ್ರಕಾರ ಹಸಿದಿರುವ ಬಡ ಕುಟುಂಬಗಳಿಗೆ ಸುಮಾರು ರೂ 1000 ದ ಆಹಾರ ವಸ್ತುಗಳನ್ನು ಪ್ರತೀ ತಿಂಗಳು ಒದಗಿಸಲಾಗುವುದು. ಇದಕ್ಕೆ ದೊಡ್ಡ ಮಟ್ಟದ ಧನ ಸಹಾಯದ ಅಗತ್ಯ ವಿದೆ.
ದಾನಿಗಳಿಂದಲೇ ಈ ಕಾರ್ಯ ಯೋಜನೆಯು ಸಫಲಗೊಳ್ಳಲು ಸಾಧ್ಯ. ಆದುದರಿಂದ ಸೃಷ್ಟಿಕರ್ತನು ತಮಗೆ ನೀಡಿದಂತಹ ಸಂಪತ್ತಿನಿಂದ ಈ ಯೋಜನೆಗೆ ಸಹಾಯ ಮಾಡಬೇಕಾಗಿ ಯೂತ್ ವಿಂಗ್ ಜಮಾಅತೆ ಇಸ್ಲಾಮೀ ಹಿಂದ್ ತಮ್ಮಲ್ಲಿ ಆಗ್ರಹಿಸತ್ತದೆ.
ಸಹಕರಿಸುವವರು ಈ ಕೆಳಗಿನ ವಿಳಾಸಕ್ಕೆ ತಿಳಿಸಬೇಕಾಗಿ ವಿನಂತಿ
ದಾವೂದ್ ಕಂಪೌಂಡ್
ವಿ.ಎಸ್.ಟಿ. ರಸ್ತೆ
ಗೀತಾಂಜಲಿ ಬಳಿ
ಉಡುಪಿ 576101
0820-253064891-9964071680
91-9945350023
No comments:
Post a Comment