Sunday, March 21, 2010

Womens Day

ಸೇವೆಗೆ ಜಾತಿ ಧರ್ಮ ಅಡ್ಡಿ ಬರದು
       ಉಡುಪಿ. March- 11. "ಸೇವೆ ಮಾಡುವ ಮನಸಸ್ಸಿದ್ದರೆ ಜಾತಿ ಧರ್ಮ ಅಡ್ಡಿ ಬರದು. ನಾವೆಲ್ಲರೂ ಮನುಷ್ಯಜಾತಿ ಎಂಬ ನೆಲೆಯಲ್ಲಿ ಒಂದಾಗಿ ಬಾಳಬೇಕು".ಎಂದು ರಾಜ್ಯು ಮಹಿಳಾ ಉಪ ನಿದರ್ೇಶಕಿ ಮಾನ್ಯ ಸುಮನಾರವರು ರಾಜ್ಯ ಮಹಿಳಾ ಸ್ತ್ರೀ ಸೇವಾ ನಿಕೇತನ ಉಡುಪಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಮಹಿಳಾ ವಿಭಾಗ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೇಳಿದರು.  
      ನಾವೆಲ್ಲರೂ ಒಂದೇ ದೇವನ ಸೃಷ್ಟಿಗಳು. ಒಂದೇ ತಂದೆ ತಾಯಿಯ ಮಕ್ಕಳು. "ಈ ಲೋಕದಲ್ಲಿ ಸೃಷ್ಟಿಕರ್ತನು ಸಕಲ ಮಾನವರಿಗೆ ಒದಗಿಸಿರುವ ಎಲ್ಲಾ ಸವಲತ್ತುಗಳನ್ನು ಮಾನವನು ಅನುಭವಿಸಿ ಜೀವಿಸುತ್ತಿರುವಾಗ ತನ್ನ ಪರಿಸರದಲ್ಲಿ ಸಂಕಷ್ಟದಲ್ಲಿ ಇರುವವರಿಗೂ ನೆರವಾಗ ಬೆಕಾದುದು ಅವನ ಕರ್ತವ್ಯವಾಗಿರುತ್ತದೆ" ಎಂದು ಕುಲ್ಸೂಮ್ ಅಬೂಬಕ್ಕರ್ ಹೇಳಿದರು.

ಅಲ್ಲಿಯ ಹೆಣ್ಣು ಮಕ್ಕಳು ಸಾಂಸೃತಿಕ ಕಾರ್ಯಕ್ರಮವನ್ನು ಪ್ರದಶರ್ಿಸಿದರು. 

    ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ವತಿಯಿಂದ ವಿವಿಧ ಸ್ಪಧರ್ೆಗಳನ್ನು ಆಯೋಚಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಟ್ಟೆ ಬರೆಗಳನ್ನು ಕೂಡ ವಿತರಿಸಲಾಯಿತು 

    ಸಮೀನಾ ಶುಕೂರ್ ರವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಶಹನಾಝ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಆಸಿಯಾ ಶರೀಫ್ ಮಲ್ಪೆ ಉಪಸ್ಥಿತರಿದ್ದರು.










http://www.gulfkannadiga.com/news-22044.html




 

Friday, March 19, 2010

Youth Wing Jamat-e-Islami Hind Udupi


 ಹಸಿವು ಮುಕ್ತ ಸಮಾಜಕ್ಕಾಗಿ servy
      ಉಡುಪಿ-March 14 ನಮ್ಮ ಜಿಲ್ಲೆಯ ಜನತೆ ಹಸಿವಿನಿಂದ ಬಳಲಬಾರದು, ಎಲ್ಲರಿಗೂ ಊಟ ಸಿಗಬೇಕು, "ನೆರೆಕರೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ". ಹಾಗೆಯೇ "ಧರ್ಮ ವಿರೋಧಿಗಳು ಯಾರು ಎಂದರೆ ಹಸಿದವನಿಗೆ ಉಣಬಡಿಸದವನು" ಎಂಬ ಇಸ್ಲಾಮ್ ಧರ್ಮದ ಮಾನವ ಸೇವೆಯ ಆದರ್ಶಗಳ ಬೆಳಕಿನಲ್ಲಿ ಯೂತ್ವಿಂಗ್ (YOUTH WING) ಜಮಾಅತೆ ಇಸ್ಲಾಮೀ ಹಿಂದ್ ಉಡುಪಿಯ ಕಾರ್ಯಕರ್ತರು ಜಿಲ್ಲಾದ್ಯಂತ ಮನೆ ಮನೆಗೆ ಭೇಟಿ ನೀಡಿ ಬಡವರನ್ನು, ನಿರ್ಗತಿಕರನ್ನು, ಹಸಿದವರನ್ನು ಸಂದಶರ್ಿಸಿದರು. 
       

ಮುಂದಿನ ಕಾರ್ಯಯೋಜನೆಯ ಪ್ರಕಾರ ಹಸಿದಿರುವ ಬಡ ಕುಟುಂಬಗಳಿಗೆ ಸುಮಾರು ರೂ 1000 ದ ಆಹಾರ ವಸ್ತುಗಳನ್ನು ಪ್ರತೀ ತಿಂಗಳು ಒದಗಿಸಲಾಗುವುದು. ಇದಕ್ಕೆ ದೊಡ್ಡ ಮಟ್ಟದ ಧನ ಸಹಾಯದ ಅಗತ್ಯ ವಿದೆ. 
 
ದಾನಿಗಳಿಂದಲೇ ಈ ಕಾರ್ಯ ಯೋಜನೆಯು ಸಫಲಗೊಳ್ಳಲು ಸಾಧ್ಯ. ಆದುದರಿಂದ ಸೃಷ್ಟಿಕರ್ತನು ತಮಗೆ ನೀಡಿದಂತಹ ಸಂಪತ್ತಿನಿಂದ ಈ ಯೋಜನೆಗೆ ಸಹಾಯ ಮಾಡಬೇಕಾಗಿ ಯೂತ್ ವಿಂಗ್ ಜಮಾಅತೆ ಇಸ್ಲಾಮೀ ಹಿಂದ್ ತಮ್ಮಲ್ಲಿ ಆಗ್ರಹಿಸತ್ತದೆ.




ಸಹಕರಿಸುವವರು ಈ ಕೆಳಗಿನ ವಿಳಾಸಕ್ಕೆ ತಿಳಿಸಬೇಕಾಗಿ ವಿನಂತಿ
ದಾವೂದ್ ಕಂಪೌಂಡ್
ವಿ.ಎಸ್.ಟಿ. ರಸ್ತೆ
ಗೀತಾಂಜಲಿ ಬಳಿ
ಉಡುಪಿ 576101
0820-2530648
91-9964071680
91-9945350023

 

Tuesday, March 9, 2010

Lal Husain Kandhagal Udupi (Searath Program (Kolambe Udupi) 07-03-2010


 

          ಜಾತಿ-ಮತ, ಬೇಧ-ಭಾವ, ಉಚ್ಚ-ನೀಚ, ಮೇಳು-ಕೀಳು, ವರ್ಗ-ವರ್ಣ, ಬಿಳಿಯ-ಕರಿಯನೆಂಬ ಅಸಮಾನತೆಯ ಅಂಧಕಾರದೊಳಗೆ ಬಿದ್ದು ತೊಳಲಾಡುತ್ತಿದ್ದ ಅಂದಿನ ಸಮಾಜದಲ್ಲಿ ಮಾನವೀಯತೆಯ ಸಂದೇಶವನ್ನು ನೀಡಿ ಅದನ್ನು ಅರೇಬಿಯಾದಲ್ಲಿ 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್(ಸ)ರವರು  ಅನುಷ್ಟಾನಕ್ಕೆ ತಂದಿದ್ದರು. ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆಯ ವಿರುದ್ಧ ಕೈ ಕಟ್ಟಿ ಕುಳಿತಿರುವುದು ಸತ್ಯವಿಷ್ವಾಸಿಯ ಲಕ್ಷಣವಲ್ಲ. ಎಂದು ಲಾಲ್ ಹುಸೈನ್ ಕಂದಗಲ್ರವರು ಕೊಳಂಬೆಯಲ್ಲಿ ಸೀರತ್ ಆಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಹೇಳಿದರು.
 
    ಮುಂದುವರಿಯುತ್ತಾ ಅವರು "ಅನಾಗರಿಕ ಕಾಲದಲ್ಲಿ ಇದ್ದಂತಹ ಕೆಡುಕುಗಳು ಇಂದಿನ ನಾಗರಿಕ ಕಾಲದಲ್ಲಿಯೂ ತೀವ್ರವಾಗಿ ಹರಡುತ್ತಿದೆ, ಇದನ್ನು ನಿವಾರಿಸುವ ಪ್ರಮುಖ ಜವಾಬ್ದಾರಿ ಪ್ರವಾದಿ ಮುಹಮ್ಮದ್ (ಸ) ರವರ ಆದರ್ಶಗಳನ್ನು ಅನುಸರಿಸುವವರ ಮೇಲೆ ಕಡ್ಡಾಯವಾಗಿದ್ದು, ಪ್ರವಾದಿಯವರ ಜೀವನವು ಮಾದರಿಯಾಗಬೇಕಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಅಕ್ಬರ್ ಅಲಿ ಉಡುಪಿ ಇವರು, ಪ್ರವಾದಿ ಮುಹಮ್ಮದ್(ಸ)ರವರನ್ನು ಹೆಚ್ಚು ಪ್ರೀತಿಸುವವರಲ್ಲಿ, ಅವರನ್ನು ಹೆಚ್ಚು ಅನುಸರಿಸುವವರಲ್ಲಿ, ಅವರ ಸಂದೇಶಗಳನ್ನು ಹೆಚ್ಚು ಪ್ರಚಾರ ಮಾಡುವವರಲ್ಲಿ, ಅವರ ಜೀವನ ಚರಿತ್ರೆಯ ಬಗ್ಗೆ ಜನರಿಗೆ ತಿಳಿಯುವಂತೆ ಸಾಹಿತ್ಯಗಳನ್ನು ರಚಿಸುವುದರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪ್ರಥಮ ಸ್ಥಾನದಲ್ಲಿ ಇದೆ. ಇಂದು ಮುಸ್ಲಿಮ್ ಸಮುದಾಯವು ಪ್ರವಾದಿ ಮುಹಮ್ಮದ್(ಸ) ಯಾವ ಕೆಲಸವನ್ನು ನೆರವೇರಿಸಲು ಆದೇಶಿಸಿದ್ದಾರೋ ಅದನ್ನು ನೆರವೇರಿಸದೆ ಕೆಲವು ಸೀಮಿತ ದಿನಗಳಲ್ಲಿ ಮಾತ್ರ ಅವರ ಮೇಲೆ ಪ್ರೇಮವನ್ನು ಪ್ರಕಟಿಸುವುದು ಇಂದು ಕಂಡುಬರುತ್ತಿದೆ. ಸಕಲ ಮಾನವರಿಗಾಗಿ ಸೃಷ್ಟಿಕರ್ತನಿಂದ ಕಳುಹಿಸಲ್ಪಟ್ಟ ಪ್ರವಾದಿ ಮುಹಮ್ಮದ್(ಸ)ರವರ ಸಂದೇಶವನ್ನು ಜಗತ್ತಿನ ಜನರ ಮುಂದೆ ಇಡಬೇಕಾಗಿದೆ.
 
ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೌಲಾನ ಮುಹಮ್ಮದ್ ಆದಮ್ ಹೂಡೆ ಇವರು, ಪ್ರವಾದಿ ಮುಹಮ್ಮದ್(ಸ)ರವರ ಮಾರ್ಗದರ್ಶನದಂತೆ ಜೀವನ ಸಾಗಿಸುವುದು ನೈಜ ಸತ್ಯವಿಶ್ವಾಸಿ(ಮೂಮಿನ್)ಯ ಲಕ್ಷಣವಾಗಿದ್ದು ಅದರಂತೆ ನಾವು ಜೀವಿಸಬೇಕು ಎಂದರು. 

ಹಾಫಿಝ್ ಮುಹಮ್ಮದ್ ಯೂನುಸ್ರವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಯು.ಅನ್ವರ್ ಅಲಿ ಕಾಪು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಮುನೀರ್ ಮುಹಮ್ಮದ್ರವರು ಧನ್ಯವಾದ ನೀಡಿದರು.
    ವೇದಿಕೆಯಲ್ಲಿ ಶಾಂತಿನಗರ ಮದೀನ ಮಸೀದಿಯ ಅಧ್ಯಕ್ಷ ಅಬ್ದುಲ್ ಗಫೂರ್ ಸಾಹೇಬ್, ಕಾರ್ಯದಶರ್ಿ ಶಮೀಮ್ ಸಾಹೇಬ್, ನಾಸಿರ್ ಶೇಖ್ ಕುಕ್ಕಿಕಟ್ಟೆ, ಇಸ್ಮಾಯೀಲ್ ಮೀರಾ, ಮುನೀರ್ ಮುಹಮ್ಮದ್ರವರು ಉಪಸ್ಥಿತರಿದ್ದರು.

Please click Electronic media links below 

gulfkannadiga.com/news

mangalorean.com

coastaldigest.com

sahilnews.org/kannada

mangaloremithr.com

 kemmannu.com

 mangalorepages.com


 

News in Varthabharathi

Tuesday, March 2, 2010

Serath Program Udupi Jamiya Masjid On 28-02-2010

ಉಡುಪಿ. ಮಾಚರ್ಿ 3.ಇಂದಿನ ಸಮಾಜದಲ್ಲಿ ತಂದೆ ತಾಯಿಯವರ ಆಚಾರ, ವಿಚಾರಗಳು ಸರಿಯಾಗಿರದ ಕಾರಣ ಮಕ್ಕಳು ಕೂಡಾ ಅದೇ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಉಡುಪಿ ಜಾಮಿಯ ಮಸೀದಿಯ ಇಮಾಮರಾದ ಅಬ್ದುಲ್ ರಹೀಮ್ ಖಾನ್ ಶಿರಾನಿಯವರು ಉಡುಪಿ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ  ಪ್ರವಾದಿ ಮುಹಮ್ಮದ್ (ಸ) ರ ಜೀವನ ಮತ್ತು ಸಂದೇಶ ಎಂಬ ವಿಷಯದಲ್ಲಿ ಆಯೋಜಿಸಲಾದ ಸಾಮುದಾಯಿಕ ಕಾರ್ಯಕ್ರಮದಲ್ಲಿ ಹೇಳಿದರು.


ಮುಂದುವರಿದು ಅವರು ಇಸ್ಲಾಮ್ ಕೇವಲ ನಮಾಝ್,ಉಪವಾಸ, ಹಜ್ಜ್ ನಂತಹ ಕರ್ಮಗಳಿಗೆ ಮಾತ್ರ ಸೀಮಿತ ಅಲ್ಲ ಬದಲಾಗಿ ರೋಗಿಗಳಿಗೆ, ಬಡವ ಬಲ್ಲಿದರಿಗೆ, ನಿರ್ಗತಿಗರಿಗೆ, ಶೋಷಿತರಿಗೆ, ಸಹಕರಿಸಲು ಆದೇಶಿಸುತ್ತ ಶತ್ರುವಿನೊಂದಿಗೂ ಉತ್ತಮ ರೀತಿಯಲ್ಲಿ ವತರ್ಿಸಬೇಕೆಂದು, ನೆರೆಕರೆಯವನು ಹಸಿದಿರುವಾಗ ಹೊಟ್ಟೆ ತುಂಭಾ ಉಂಡು ಮಲಗುವವನು ನಮ್ಮವನಲ್ಲ ಎಂದು ಪ್ರವಾದಿ ವಚನ ನಮಗೆ ಭೋಧಿಸುತ್ತದೆ, ಪ್ರವಾದಿ ಮೇಲಿನ ಪ್ರೇಮವು ಅವರ ಆದರ್ಶವನ್ನು ಸಂಪೂರ್ಣ ತನ್ನ ಜೀವನದಲ್ಲಿ ಅನುಸರಿಸುವುದರಲ್ಲಿ ಮಾತ್ರ ಸಾದ್ಯ ಎಂದು ಹೇಳಿದರು.

     ಕೋಟಿಗಟ್ಟಲೆ ಖಚರ್ು(spend) ಮಾಡುವ ನಮ್ಮ ಸಮುದಾಯಕ್ಕೆ ಇಂತಹ ಸಂದರ್ಭದಲ್ಲಿ  ಒಂದೇ ಒಂದು ಮೌಲ್ಯಯುತ ಸಂದೇಶವನ್ನು ಈ ಸಮಾಜಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಉಚ್ಛನೀಚತೆಯನ್ನು ಅಳಿಸಿದ ಧರ್ಮ, ವರ್ಷಗಟ್ಟಲೆ ದ್ವೇಶ ಹಗೆತನದಿಂದ ಯುದ್ಧ ಮಾಡುತ್ತಿದ್ದ ಜನಾಂಗವನ್ನು ಒಟ್ಟು ಸೇರಿಸಿದ ಧರ್ಮ, ಸೃಷ್ಟಿಗಳನ್ನು ಆರಾಧಿಸುತ್ತಿರುವ ಜನಾಂಗವನ್ನು ತನ್ನ ನೈಜ ಸೃಷ್ಟಿಕರ್ತನನ್ನು ಆರಾಧಿಸುವಂತೆ ಮಾಡಿದ ಧರ್ಮ. ಈ  ಸಂದೇಶವು ಜಗತ್ತಿನ ಸಕಲ ಮಾನವರಿಗಾಗಿರುತ್ತದೆ ಅದೇ ರೀತಿ ವ್ರವಾದಿಯವರು ಕೂಡ ಸಕಲ ಮಾನವರ ಪ್ರವಾದಿಯಾಗಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾದ ಸಯೀದ್ ಇಸ್ಮಾಯೀಲ್ ಹೇಳಿದರು.
ಮೌಲಾನ ಅಬ್ದುಲ್ ಅಝೀಝ್ ಉಮರಿಯವರು ಕರ್ಆನ್ ಪಠಿಸಿದರು. ಮುಹಮ್ಮದ್ ಮರಕಡ ಪ್ರಾಸ್ತಾವಿಕ ಭಾಷಣ ಮಾಡಿದರು, ಫಿರೋಝ್ಮನ್ನ ಧನ್ಯವಾದವಿತ್ತರು.
http://www.megamedianews.in/02.03.10SeirathProgram.htm

http://www.gulfkannadiga.com/news-19670.htm

http://mangalorean.com/news.php?newstype=broadcast&broadcastid=171577

 http://www.kemmannu.com/articles/index.asp?id=345

http://www.daijiworld.com/news/news_disp.asp?n_id=73316&n_tit=Udupi%3A+Implement+Values+of+Prophet+Muhammad+-+Abdul+Rahim+Khan

http://www.coastaldigest.com/index.php?option=com_content&view=article&id=2973:guardians-should-be-true-models-for-kids&catid=57:news-stories&Itemid=68

http://www.mangaloremithr.com/news/story.aspx?News-ID=7604