ಹಣ್ಣು ಹಂಪಲು ವಿತರಣೆ.
ಉಡುಪಿ, ಫೆಬ್ರವರಿ 28-ರೋಗಿಗಳ ಶುಶ್ರುಷೆ, ದೀನ ದಲಿತರಿಗೆ ಹಾಗೂ ಬಡವರಿಗೆ ಆಹಾರ ಒದಗಿಸುವುದು ಧರ್ಮದ ಒಂದು ಅಂಗವಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಸರ್ಜನ್ ಮಾನ್ಯ ದಯಾನಂದ ನಾಯ್ಕ ರವರ ಸಹಕಾರದೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾನೀಯ ಶಾಖೆಯ ವತಿಯಿಂದ ಉಡುಪಿಯ, ಸರಕಾರಿ ಆಸ್ಪತ್ರೆ ಅಜ್ಜರ ಕಾಡು, Alankar Takies ಬಳಿ ಇರುವ ಮಹಿಳೆಯರ ಹೆರಿಗೆ ಆಸ್ಪತ್ರೆ ಹಾಗೂ ಮಕ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸಿರಾಜುದ್ದೀನ್,ಅಬ್ದುಲ್ ಅಝೀಝ್ ಆದಿ ಉಡುಪಿ, ಮುಹಮ್ಮದ್ ಮರಕಡ, ಅಲಿ ಹಸನ್, ಅಬ್ದುಲ್ ಅಝೀಝ್ ಮೌಲಾನ, ಶೌಕತ್ ಅಸಾದಿ, ನಿಸ್ಸಾರ್ ಅಹ್ಮದ್, ರಯೀಸ್ ಅಹ್ಮದ್, ಅಬ್ದುಲ್ ಅಝೀಝ್ ಉದ್ಯಾವರ, ಫಿರೋಝ್ ಮನ್ನಾ ಉಪಸ್ಥಿತರಿದ್ದರು.
No comments:
Post a Comment