Wednesday, June 16, 2010

Board of Islamic Education Karnataka &Goa 2009-2010 Felicitation Program



ಜಾತಿ ಮತ್ತು ವಯಸ್ಸು ಜ್ಞಾನಾರ್ಜನೆಗೆ ತಡೆಯಾಗದು


       ಯಾವುದೇ ಜಾತಿ ಮತ ಭೇದವಿಲ್ಲದೆ ಇಸ್ಲಾಮಿನ ಜ್ಙಾನವನ್ನು ಸಂಪಾದಿಸಬೇಕು ಎಂದು ಶ್ರೀ ರಮೇಶ್ (ಪ್ರಾಂಶುಪಾಲರು, ಸರಕಾರಿ ಪದವಿಪೂರ್ವ ಕಾಲೇಜು, ಉಡುಪಿ) ಇವರು ಉಡುಪಿ ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾದ ಬೋಡರ್್ ಆಫ್ ಇಸ್ಲಾಮಿಕ್ ಎಜುಕೇಷನ್ ಕನರ್ಾಟಕ ಮತ್ತು ಗೋವಾ 2009-2010ನೇ ಸಾಲಿನ 'ಇಸ್ಲಾಮಿಕ್ ಸಟರ್ಿಫಿಕೇಟ್ ಕೋಸರ್್' ಹಾಗೂ 'ಡಿಪ್ಲೋಮ ಇನ್ ಇಸ್ಲಾಮಿಕ್ ಸ್ಟಡೀಸ್'ನಲ್ಲಿ ಪರೀಕ್ಷೆ ಬರೆದ ವಿದ್ಯಾಥರ್ಿಗಳ ಅಂಕಪಟ್ಟಿ, ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರೆ ನೀಡಿದರು.

       ಇನ್ನೋರ್ವ ಅಥಿತಿ ಕರಾವಳಿ ಕಾಲೇಜ್ ಆಫ್ ಫಾರ್ಮಸಿ, ಮಂಗಳೂರು ಇದರ ಉಪನ್ಯಾಸಕರಾದ ಮುಹಮ್ಮದ್ ಮುಬೀನ್ರವರು ವಯಸ್ಸಿನ ಮಿತಿ ಇಲ್ಲದೆ ಗೋರಿಯ ತನಕವೂ ಜ್ಞಾನವನ್ನು ಸಂಪಾದಿಸಬೇಕು ಎಂದು ಹೇಳಿದರು.

ಅಬ್ದುಲ್ ಅಝೀಝ್ ಆದಿಉಡುಪಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬೋಡರ್್ ಆಫ್ ಇಸ್ಲಾಮಿಕ್ ಎಜುಕೇಷನ್ ಉಡುಪಿ ಜಿಲ್ಲಾ ಸಂಚಾಲಕರಾದ ನಿಸಾರ್ ಉಪ್ಪಿನಕೋಟೆ ವರದಿ ಮಂಡಿಸಿದರು ,  
ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು, ಜಾಮಿಯಾ ಮಸೀದಿಯ ಇಮಾಮರಾದ ಮೌಲಾನ ಅಬ್ದುಲ್ ರಹೀಮ್ ಖಾನ್ ಶಿರಾನಿಯವರು ಕುರ್ಆನ್ ಪಠಿಸಿದರು,  
ಫಿರೋಝ್ ಮನ್ನಾ ಧನ್ಯವಾದವಿತ್ತರು. ಅಕ್ಬರ್ ಅಲಿ, ಆಸಿಫ್ ಜಿ.ಡಿ ಉಪಸ್ತಿತರಿದ್ದರು.


Please Clic.....News at Media---- gulfkannadiga.com





No comments:

Post a Comment