Tuesday, March 2, 2010

Serath Program Udupi Jamiya Masjid On 28-02-2010

ಉಡುಪಿ. ಮಾಚರ್ಿ 3.ಇಂದಿನ ಸಮಾಜದಲ್ಲಿ ತಂದೆ ತಾಯಿಯವರ ಆಚಾರ, ವಿಚಾರಗಳು ಸರಿಯಾಗಿರದ ಕಾರಣ ಮಕ್ಕಳು ಕೂಡಾ ಅದೇ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಉಡುಪಿ ಜಾಮಿಯ ಮಸೀದಿಯ ಇಮಾಮರಾದ ಅಬ್ದುಲ್ ರಹೀಮ್ ಖಾನ್ ಶಿರಾನಿಯವರು ಉಡುಪಿ ಜಾಮಿಯಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ  ಪ್ರವಾದಿ ಮುಹಮ್ಮದ್ (ಸ) ರ ಜೀವನ ಮತ್ತು ಸಂದೇಶ ಎಂಬ ವಿಷಯದಲ್ಲಿ ಆಯೋಜಿಸಲಾದ ಸಾಮುದಾಯಿಕ ಕಾರ್ಯಕ್ರಮದಲ್ಲಿ ಹೇಳಿದರು.


ಮುಂದುವರಿದು ಅವರು ಇಸ್ಲಾಮ್ ಕೇವಲ ನಮಾಝ್,ಉಪವಾಸ, ಹಜ್ಜ್ ನಂತಹ ಕರ್ಮಗಳಿಗೆ ಮಾತ್ರ ಸೀಮಿತ ಅಲ್ಲ ಬದಲಾಗಿ ರೋಗಿಗಳಿಗೆ, ಬಡವ ಬಲ್ಲಿದರಿಗೆ, ನಿರ್ಗತಿಗರಿಗೆ, ಶೋಷಿತರಿಗೆ, ಸಹಕರಿಸಲು ಆದೇಶಿಸುತ್ತ ಶತ್ರುವಿನೊಂದಿಗೂ ಉತ್ತಮ ರೀತಿಯಲ್ಲಿ ವತರ್ಿಸಬೇಕೆಂದು, ನೆರೆಕರೆಯವನು ಹಸಿದಿರುವಾಗ ಹೊಟ್ಟೆ ತುಂಭಾ ಉಂಡು ಮಲಗುವವನು ನಮ್ಮವನಲ್ಲ ಎಂದು ಪ್ರವಾದಿ ವಚನ ನಮಗೆ ಭೋಧಿಸುತ್ತದೆ, ಪ್ರವಾದಿ ಮೇಲಿನ ಪ್ರೇಮವು ಅವರ ಆದರ್ಶವನ್ನು ಸಂಪೂರ್ಣ ತನ್ನ ಜೀವನದಲ್ಲಿ ಅನುಸರಿಸುವುದರಲ್ಲಿ ಮಾತ್ರ ಸಾದ್ಯ ಎಂದು ಹೇಳಿದರು.

     ಕೋಟಿಗಟ್ಟಲೆ ಖಚರ್ು(spend) ಮಾಡುವ ನಮ್ಮ ಸಮುದಾಯಕ್ಕೆ ಇಂತಹ ಸಂದರ್ಭದಲ್ಲಿ  ಒಂದೇ ಒಂದು ಮೌಲ್ಯಯುತ ಸಂದೇಶವನ್ನು ಈ ಸಮಾಜಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಉಚ್ಛನೀಚತೆಯನ್ನು ಅಳಿಸಿದ ಧರ್ಮ, ವರ್ಷಗಟ್ಟಲೆ ದ್ವೇಶ ಹಗೆತನದಿಂದ ಯುದ್ಧ ಮಾಡುತ್ತಿದ್ದ ಜನಾಂಗವನ್ನು ಒಟ್ಟು ಸೇರಿಸಿದ ಧರ್ಮ, ಸೃಷ್ಟಿಗಳನ್ನು ಆರಾಧಿಸುತ್ತಿರುವ ಜನಾಂಗವನ್ನು ತನ್ನ ನೈಜ ಸೃಷ್ಟಿಕರ್ತನನ್ನು ಆರಾಧಿಸುವಂತೆ ಮಾಡಿದ ಧರ್ಮ. ಈ  ಸಂದೇಶವು ಜಗತ್ತಿನ ಸಕಲ ಮಾನವರಿಗಾಗಿರುತ್ತದೆ ಅದೇ ರೀತಿ ವ್ರವಾದಿಯವರು ಕೂಡ ಸಕಲ ಮಾನವರ ಪ್ರವಾದಿಯಾಗಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾದ ಸಯೀದ್ ಇಸ್ಮಾಯೀಲ್ ಹೇಳಿದರು.
ಮೌಲಾನ ಅಬ್ದುಲ್ ಅಝೀಝ್ ಉಮರಿಯವರು ಕರ್ಆನ್ ಪಠಿಸಿದರು. ಮುಹಮ್ಮದ್ ಮರಕಡ ಪ್ರಾಸ್ತಾವಿಕ ಭಾಷಣ ಮಾಡಿದರು, ಫಿರೋಝ್ಮನ್ನ ಧನ್ಯವಾದವಿತ್ತರು.
http://www.megamedianews.in/02.03.10SeirathProgram.htm

http://www.gulfkannadiga.com/news-19670.htm

http://mangalorean.com/news.php?newstype=broadcast&broadcastid=171577

 http://www.kemmannu.com/articles/index.asp?id=345

http://www.daijiworld.com/news/news_disp.asp?n_id=73316&n_tit=Udupi%3A+Implement+Values+of+Prophet+Muhammad+-+Abdul+Rahim+Khan

http://www.coastaldigest.com/index.php?option=com_content&view=article&id=2973:guardians-should-be-true-models-for-kids&catid=57:news-stories&Itemid=68

http://www.mangaloremithr.com/news/story.aspx?News-ID=7604