Sunday, August 29, 2010

IFTHAR PARTY At Santhekatte Udupi

IFTHAR PARTY

ಒಂದೇ ದೇವ ಒಂದೇ ಧರ್ಮ: ಅಕ್ಬರ್ ಅಲಿ

ನಮ್ಮ ಅಂಗಾಂಗಗಳು, ನಮ್ಮ ರಕ್ತ, ನಮ್ಮ ಮೈ ಬಣ್ಣ, ನಾವು ಸೇವಿಸುವ ಗಾಳಿ, ನಾವು ಉಪಯೋಗಿಸುವ ಪ್ರಾಕೃತಿಕ ವಸ್ತುಗಳು ಎಲ್ಲವೂ ಒಂದೇ ರೀತಿಯದ್ದಾಗಿರುತ್ತದೆ. ನಮ್ಮೆಲ್ಲರನ್ನೂ ಕೂಡ ಸೃಷ್ಟಿಸಿದವನು  ಒಬ್ಬನೇ ಆಗಿರುತ್ತಾನೆ. ನಮ್ಮ ಸೃಷ್ಟಿ ಒಂದೇ ತಂದೆ ತಾಯಿಯಿಂದಾಗಿರುತ್ತದೆ.  ಹೀಗಿರುವಾಗ ಅನೇಕ ಧರ್ಮಗಳು ಇರಲು, ಅನೇಕ ದೇವರುಗಳು ಇರಲು ಹೇಗೆ ಸಾಧ್ಯ?, ನಾವು ಧರ್ಮವನ್ನು  ಸರಿಯಾಗಿ ಅರಿತಿಲ್ಲದ ಕಾರಣದಿಂದ ಹೀಗಾಗಲು ಸಾಧ್ಯ. ನಾವೆಲ್ಲರೂ ಸಮಾನರು, ನಮ್ಮೆಲ್ಲರ ದೇವನು ಒಬ್ಬನೇ ಆಗಿರುವಾಗ ಧರ್ಮ ಕೂಡ ಒಂದೇ ಆಗಿರಬೇಕು ಎಂದು ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದ ಅಧ್ಯಕ್ಷರಾದ ಅಕ್ಬರ್ ಅಲಿಯವರು ಸಂತೆ ಕಟ್ಟೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಆಯೋಜಿಸಿದ ಸೌಹಾರ್ಧ ಇಫ್ತಾರ್ ಪಾಟರ್ಿ ಕಾರ್ಯಕ್ರಮದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಮುಂದುವರಿದು ಅವರು, "ನಾವು ಧರ್ಮವನ್ನು ಕೆಲವು ಆಚಾರಗಳಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ನಿಜವಾಗಿ ಧರ್ಮವು ಜನರನ್ನು ಒಗ್ಗೂಡಿಸುವ, ಜನರನ್ನು ಸಂಸ್ಕರಿಸುವ, ಸುಂದರ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ, ಯಾವ ಧರ್ಮವೂ ಕೂಡ ಜನರನ್ನು ಒಡೆಯುವ, ವಿಂಗಡಿಸುವ ಕೆಲಸ ಮಾಡಲಾರದು. ಹಾಗೆ ಮಾಡಿದರೆ ಅದು ಧರ್ಮವೇ ಅಲ್ಲ . ಆದುದರಿಂದ ನಾವು ಧರ್ಮವನ್ನು ಸರಿಯಾಗಿ ಅಧ್ಯಯನ ಮಾಡಬೇಕಾಗಿದೆ. ನಾವು ಎಲ್ಲಿ ತಪ್ಪಿದ್ದೇವೆ....? ಎಂಬುದರ ಬಗ್ಗೆ ಅವಲೋಕನ ನಡೆಸಬೇಕಾಗಿದೆ.
ಪವಿತ್ರ ಕುರ್ಆನ್ ಸಕಲ ಮಾನವರ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನಿಂದ ರಮಝಾನ್ ತಿಂಗಳಲ್ಲಿ ಅವತೀರ್ಣಗೊಂಡಿರುತ್ತದೆ. ಇದು ಮುಸಲ್ಮಾನರಿಗೆ ಮಾತ್ರ ಸೀಮಿತವಾದ ಗ್ರಂಥ ಅಲ್ಲ. ಆದುದರಿಂದ ಈ ತಿಂಗಳಲ್ಲಿ ಉಪವಾಸ ವೃತವನ್ನು ಆಚರಿಸಲು ಆದೇಶಿಸಲಾಗಿದೆ. ಉಪವಾಸವು ಮನುಷ್ಯನನ್ನು ತರಬೇತಿಗೊಳಿಸುತ್ತದೆ. ಹಸಿವಿನ ಮೂಲಕ, ಅಶ್ಲೀಲ ಕಾರ್ಯಗಳಿಂದ, ಸುಳ್ಳು, ಜಗಳಗಳಿಂದ, ದೂರ ಇರಬೇಕೆಂದು ಉಪವಾಸವು ಆದೇಶಿಸುತ್ತದೆ. ಹೆಚ್ಚು ದಾನಧರ್ಮಗಳನ್ನು ಮಾಡಲು, ಹಾಗೆಯೇ ಝಕಾತ್ ಎಂಬ ವ್ಯವಸ್ಥೆಯನ್ನು ಮಾಡಿದೆ. ಸಂಪತ್ತಿನ ಶೇಕಡ 2.50% ಪ್ರತೀ ವರ್ಷ ದಾನ ಮಾಡಬೇಕೆಂದು ಆದೇಶಿಸುತ್ತದೆ. ಆ ಮೂಲಕ ಸಮಾಜದಲ್ಲಿ ಯಾರು ಕೂಡ ಬಡವರು ಇರಬಾರದು ಎಂದು ದರ್ಮವು ಬಯಸುತ್ತದೆ. ಎಂದು ಹೇಳಿದರು.
ಎಲ್ಲ ಧಮರ್ಿಯರು ಸಮಾಜದಲ್ಲಿ ಒಂದಾಗಿ ಬಾಳಲು ಇಂದಿನ ರಾಜಕೀಯ ಪಕ್ಷಗಳು ತಡೆಯುಂಡು ಮಾಡುತ್ತಿದೆ. ಇಂತಹ ಸಂದರ್ಬದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನವರು ಸೌಹಾರ್ಧ ಇಫ್ತಾರ್ ಪಾಟರ್ಿಯನ್ನು ಆಯೋಜಿಸಿ ಎಲ್ಲ ದಮರ್ಿಯರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದ ಪ್ರಧಾನ ಕಾರ್ಯದಶರ್ಿಗಳಾದ ವಿಜಯಿ ಕಲ್ಯಾಣಪುರ ಇವರು ತಮ್ಮ  ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು. ಮೌಲಾನರವರ ಕುರ್ಆನ್ ಪಠಣ ಮಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ ಉಡುಪಿ ಇದರ ಅಧ್ಯಕ್ಷರಾದ ಮುಹಮ್ಮದ್ ಮರಕಡರವರು ಸ್ವಾಗತಿಸಿದರು.

 
  
   Meadia News

   1)    gulfkannadiga


   2)     kemmannu.

  
  3)     .coastaldigest


  4)     daijiworld.com